Special Message

As Salamu Alaikum Rahamthullahi wa Barakatahu Keep visiting Mehdavia Times for community updates.

Monday, June 15, 2020

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಹೇಗೆ - ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಮೆಹ್ದಾವಿಯಾ ಟೈಮ್ಸ್ ವೆಬಿನಾರ್

ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಮೆಹ್ದಾವಿಯಾ ಟೈಮ್ಸ್ ವೆಬಿನಾರ್:

ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಹೇಗೆ

  • ಪ್ರಸಿದ್ಧ ಶಿಕ್ಷಕರು ಮತ್ತು ತಜ್ಞರು ಉಪಯುಕ್ತ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ
  • ರಾಷ್ಟ್ರ ನಿರ್ಮಾಣದಲ್ಲಿ ಸಮುದಾಯಕ್ಕೆ ಮಾರ್ಗದರ್ಶನ

ಸಾಮಾಜಿಕ,ಧಾರ್ಮಿಕ ಸಂಘಟನೆಯಾದ ಮೆಹ್ದಾವಿಯಾ ಟೈಮ್ಸ್ ವೆಲ್‌ಫೇರ್ ಟ್ರಸ್ಟ್ ಜೂನ್ 13 ರಂದು ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೇಗೆ ಯಶಸ್ವಿಯಾಗುವುದು” ಜೂನ್ 25 ರಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಒಂದು ಹೊಸ ಉಪಕ್ರಮ ಎಂಬ ವೆಬಿನಾರ್ ಅನ್ನು ನಡೆಸಿತು. ವಿದ್ಯಾರ್ಥಿಗಳು ಪರೀಕ್ಷೆಯ ಮೊದಲು ಮತ್ತು ಪರೀಕ್ಷಾ ಸಮಯದಲ್ಲಿ 'ತಯಾರಿ ಮತ್ತು ಸಮಯ ನಿರ್ವಹಣೆ' ಕುರಿತು ಸಲಹೆ ಮತ್ತು ತಂತ್ರಗಳನ್ನು ಈ ವೆಬಿನಾರ್ ಮೂಲಕ ಪಡೆದುಕೊಂಡರು.

ಮೆಹ್ದಾವಿಯಾ ಟೈಮ್ಸ್ ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ 12 ವರ್ಷಗಳಿಂದ ಸಮುದಾಯದ ಸೇವೆ ಸಲ್ಲಿಸುತ್ತಿದೆ ಮತ್ತು ಇದು ಈಗ ಮೆಹ್ದಾವಿಯಾ ಸಮುದಾಯದಲ್ಲಿ ಪ್ರಸಿದ್ಧ ಸಂಸ್ಥೆಯಾಗಿದೆ.

ವೆಬಿನಾರ್ ಉದ್ದೇಶ: ವೆಬಿನಾರ್ ಮುಖ್ಯ ಉದ್ದೇಶವು, ಝೂಮ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು, ಸಮುದಾಯದ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಹಾಯ ಮಾಡುವುದು ಮತ್ತು ಮಾರ್ಗದರ್ಶನ ನೀಡುವುದು ಮಾತ್ರವಲ್ಲದೆ ನಾಯಕತ್ವ ಮತ್ತು ಜವಾಬ್ದಾರಿಯ ಪ್ರಜ್ಞೆ ಬೀಜ ಬಿತ್ತನೆ ಮಾಡಿ ರಾಷ್ಟ್ರದ ಉತ್ತಮ ನಾಗರಿಕರಾಗಲು ಪ್ರೇರೇಪಿಸುವುದಾಗಿದೆ. 

COVID19  ಕಾರಣದಿಂದಾಗಿ ಆತಂಕ ಮತ್ತು ಅನಿಶ್ಚಿತತೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಸಂಘಟಕರು ಸಂಪರ್ಕ ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧವಾಗಲು ಸಹಾಯ ಮಾಡುವುದು ವೆಬಿನಾರ್ ನ ಮುಖ್ಯ ಉದ್ದೇಶವಾಗಿದೆ.

ಶ್ರೀ ಇನಾಯತ್ ಉಲ್ಲಾ ಖಾನ್,ಮೆಹ್ದಾವಿಯಾ ಟೈಮ್ಸ್ ವೆಲ್ಫೇರ್ ಟ್ರಸ್ಟ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ತಮ್ಮ ಸ್ವಾಗತ ಭಾಷಣದಲ್ಲಿ, ತಮ್ಮನ್ನು ಮತ್ತು ತಮ್ಮ ನೆಚ್ಚಿನ ವಿಷಯಗಳನ್ನು ಪರಿಚಯಿಸಲು ವಿದ್ಯಾರ್ಥಿಗಳಿಗೆ ಸೂಚಿಸಿದರು. ಈ ಮೂಲಕ ಅವರನ್ನು ನಿರಾಳಗೊಳಿಸಿದರು. ವಿಷಯಗಳಲ್ಲಿ ಸ್ವಯಂ ಗುರಿ ಹಾಕಿಕೊಂಡಿರುವ ಅಂಕಗಳಿಗೆ ಬದಲಾಗಿ ಗರಿಷ್ಠ ಅಂಕಗಳನ್ನು ಗಳಿಸುವ ಬಗ್ಗೆ ಪ್ರೇರಕ ಸಂವಾದ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಜ್ಞಾಪಕಶಕ್ತಿ ಉಳಿಸಿಕೊಳ್ಳುವ ರೀತಿಯಲ್ಲಿ ಪರೀಕ್ಷೆಗಳಿಗೆ ತಯಾರಿ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಆಯೋಜಿಸುವ ಯುಪಿಎಸ್ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವುಗಳನ್ನು ಹೇಗೆ ಬಳಸಬಹುದು ಎನ್ನುವುದನ್ನು ವಿವರಿಸಿದರು.

ಶ್ರೀ ಎಚ್.ಎನ್.ರಮೇಶ್ ಮಂಡ್ಯದ ಮೈಸುಗರ್ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಖ್ಯಾತ ಹಿರಿಯ ಶಿಕ್ಷಕ (ನಿವೃತ್ತ) ಅವರು ತಮ್ಮ ಮುಖ್ಯ ಭಾಷಣದಲ್ಲಿ ಡಾ. ಎಪಿಜೆ ಕಲಾಂ ಅವರ ಪ್ರೇರಕ ಕಥೆಯನ್ನು ವಿವರಿಸಿದರು. ಅಲ್ಲದೆ ಮೊದಲ ಬಾರಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್ಗೆ ಬಂದಿರುವ ವಿದ್ಯಾರ್ಥಿಗಳನ್ನು ಮತ್ತು ಇತರ ಶಿಕ್ಷಕರನ್ನು ಪ್ರೋತ್ಸಾಹಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅಪಾರ ಅನುಭವದಿಂದ ಅವರು ಪರೀಕ್ಷೆ ಎಂದರೆ ಒತ್ತಡ ಸೃಷ್ಟಿಸಿಕೊಳ್ಳುವುದಲ್ಲ, ಬದಲಿಗೆ ಅದರತ್ತ ಗಮನ ಕೊಡುವುದಾಗಿದೆ ಎಂದು ಹೇಳಿದರು. ಎಲ್ಲಕ್ಕಿಂತ ಮುಖ್ಯವಾಗಿ, ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಪರೀಕ್ಷೆಗಳಿಗೆ ದೈಹಿಕವಾಗಿ ಸದೃಢರಾಗಿರಬೇಕು ಮತ್ತು ಚತುರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶ್ರೀ ಅಬ್ದುಲ್ ಖಾದರ್ ಚಿಕ್ಕೋಡಿಯ ಸಿಎಸ್ಎಸ್ ಪ್ರೌಢ ಶಾಲೆಯ ಗಣಿತ ಶಿಕ್ಷಕ, ಅವರು “ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಹೇಗೆ ಸಿದ್ಧವಾಗಬೇಕು ” ಎಂಬ ವಿಚಾರದ ಬಗ್ಗೆ ಮಾತನಾಡಿದರು. ಗಣಿತ ಮತ್ತು ವಿಜ್ಞಾನದಲ್ಲಿ ಅವರ ಪಾಂಡಿತ್ಯವು ಅನೇಕ ಅಸ್ಪಷ್ಟ ಪ್ರಶ್ನೆಗಳನ್ನು ಪರಿಹರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿತು. ಬಹಳ ಆಸಕ್ತಿದಾಯಕವಾಗಿ ಅವರು ರೇಖಾಚಿತ್ರಗಳು ಮತ್ತು ಚಿತ್ರಗಳನ್ನು ಪರದೆ ಮೇಲೆ ಪ್ರದರ್ಶಿಸಿದರು. ಪರೀಕ್ಷೆಗಳಲ್ಲಿ ಅವರು ಏನು ಮಾಡಬೇಕೆಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿತು. ರೇಖಾಚಿತ್ರ ಮತ್ತು ಪ್ರಸ್ತುತಿಯ ಮೂಲಕ, ವಿದ್ಯಾರ್ಥಿಗಳು ನಿರ್ದಿಷ್ಟವಾಗಿರಬೇಕು ಮತ್ತು ಅದನ್ನು ಅಲಂಕರಿಸಲು ಹೆಚ್ಚು ಸಮಯ ವ್ಯಯಿಸಬೇಕಾಗಿಲ್ಲ ಎಂಬ ಪ್ರಮುಖ ಅಂಶವನ್ನು ಅವರು ವಿವರಿಸಿದರು.

ಶ್ರೀ ಇಮ್ರಾನ್ ಖಾನ್ ನಿಜಾಮುದ್ದೀನ್ ಗವಾಂಡಿ, ಚಿಕ್ಕೋಡಿ ಕಲ್ಲೋಲ್ ತಾಲೂಕು ಸರಕಾರಿ ಫ್ರೌಢ ಶಾಲೆ, ಇಂಗ್ಲೀಷ್ ಶಿಕ್ಷಕರು, ಭಾಷೆ ಮತ್ತು ಸಾಮಾಜಿಕ ವಿಜ್ಞಾನ ವಿಷಯಗಳಿಗೆ ಹೇಗೆ ಸಿದ್ಧರಾಗುವುದು ಎನ್ನುವುದರ ಕುರಿತು ಮಾಹಿತಿ ನೀಡಿದರು. ಈ ಅಧಿವೇಶನದ ಮೂಲಕ, ವಿದ್ಯಾರ್ಥಿಗಳು ಈ ವಿಷಯಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆಯುವ ಅತ್ಯುತ್ತಮ ಮಾರ್ಗವನ್ನು ಅರ್ಥಮಾಡಿಕೊಂಡರು.

ಶ್ರೀ ಇನಾಯತ್ ಉಲ್ಲಾ ಖಾನ್ ಮತ್ತು ಶ್ರೀ.  ಹಸನ್ಮಹೇದಿ ಕಲೆಲಾಜಿ ಅವರು ನಡೆಸಿಕೊಟ್ಟ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸಾಗಿತ್ತು. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಮ್ಮ ಪ್ರಶ್ನೆಗಳನ್ನು ತಜ್ಞರಿಗೆ ಕೇಳಲು ಅವಕಾಶ ನೀಡಲಾಯಿತು. ಶ್ರೀ ಎಚ್.ಎನ್ರಮೇಶ್ 'ಪರೀಕ್ಷೆಗಳ ಮೊದಲು ಮತ್ತು ಪರೀಕ್ಷಾ ಸಮಯದಲ್ಲಿ ಸಮಯವನ್ನು ಹೇಗೆ ನಿರ್ವಹಿಸುವುದು ಎಂಬ ಬಗ್ಗೆ ಸಾಮಾನ್ಯ ಸಲಹೆಗಳನ್ನು ನೀಡಿದರು.

ಮೆಹ್ದಾವಿಯಾ ಟೈಮ್ಸ್ ಸಮುದಾಯಕ್ಕೆ ಸಹಾಯ ಮಾಡಲು ನಿರಂತರವಾಗಿ ನವೀನ ಆಲೋಚನೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದು ಯುವಕರನ್ನು ಬೆಳೆಸುವಲ್ಲಿ ಸಹಾಯ ಮಾಡಿದೆ, ಉತ್ತಮ ಅಭ್ಯಾಸಗಳು ಮತ್ತು ವೃತ್ತಿಜೀವನವನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ, ಸಮುದಾಯವನ್ನು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯಲು ಕೌಶಲ್ಯಗಳನ್ನು ಸುಧಾರಿಸಲು ನೆರವು ನೀಡುತ್ತಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ, ನವೀಕರಣಗೊಳ್ಳಲು ಮತ್ತು ಅಪ್‌ಗ್ರೇಡ್ ಆಗುವುದು ಈ ಸಮಯದ ಅವಶ್ಯಕತೆಯಾಗಿದೆ. ಮೆಹ್ದಾವಿಯಾ ಟೈಮ್ಸ್ ಯುವ ಸಮುದಾಯದ ಸುಧಾರಣೆಗಾಗಿ ಶ್ರಮಿಸುತ್ತಿದೆ ಮತ್ತು ಜವಾಬ್ದಾರಿಯುತ, ಸುಸಂಸ್ಕೃತ ಮತ್ತು ಶಿಸ್ತುಬದ್ಧ ಮಾನವನಾಗಲು ಪರಿಣಾಮಕಾರಿತ್ವದ ಬೀಜವನ್ನು ಬಿತ್ತುತ್ತಿದೆ.

No comments:

Post a Comment